ಕೊಪ್ಪಳ: ಬನ್ನಿಕಟ್ಟಿ ಹತ್ತಿರದ ಹೈಸ್ಕೂಲ್ ಹಾಸ್ಟೆಲಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಲ್ಲಿ ಐದು ವಿದ್ಯಾರ್ಥಿಗಳು ಮೃತಪಟ್ಟದ್ದಾರೆ.
ಈ ದುರ್ಘಟನೆಯು ನೇರವಾಗಿ ಹಾಸ್ಟೆಲಿನ ವಾರ್ಡನ್ ಮತ್ತು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಯದಿಂದಾಗಿದ್ದು, ಈ ಮುಂಚೆ ಹಲವು ಸಂಘಟನೆಗಳು ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದರೂ ನಿರ್ಲಕ್ಷಿಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಡೆಗಣಿಸಿ ಈ ದುರ್ಘಟನೆಗೆ ಕಾರಣವಾದ ಎಲ್ಲ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ಮನೆ ಬಿಟ್ಟು ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಸರಕಾರ ಎಷ್ಟು ಕಾಳಜಿ ಹೊಂದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡ ನೋವಿಗೆ ಪರಿಹಾರ ನೀಡಲು ಸರಕಾರಕ್ಕೆ ಸಾಧ್ಯವೇ? ಬೇರೆಲ್ಲಾ ವಿಚಾರದಲ್ಲಿ ಕೋಟಿಗಟ್ಟಲೆ ಪೋಲು ಮಾಡುವ ಸರಕಾರಗಳು ಯಾಕೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಿರ್ಲಕ್ಯ ಮಾಡುತ್ತಿದೆ. ಈ ಬಗ್ಗೆ ಕೂಡಲೇ ಸರಕಾರ ಎಚ್ಚೆತ್ತು ಸರಕಾರಿ ಹಾಸ್ಟೆಲ್ಗಳಲ್ಲಿನ ಅವ್ಯವಸ್ಥೆ ಸರಿಪಡಿಸುವುದರೊಂದಿಗೆ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕೆಂದು ಈ ಮೂಲಕ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ರಾಜ್ಯ ಮಾಧ್ಯಮ ಕಾರ್ಯದರ್ಶಿ.
ಎಸ್.ಐ.ಓ ಕರ್ನಾಟಕ