ಹಂಪಿ : ಕನ್ನಡ ನಾಡು ನುಡಿಯ ಸಂಶೋಧನೆಗಾಗಿ ಸ್ಥಾಪನೆಯಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಈಗ ಫೆಲೋಶಿಪ್ ಹಣ ಇಲ್ಲದೇ, ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿವಿಯ SC,ST ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡೋದನ್ನು ನಿಲ್ಲಿಸಲಾಗಿದೆ‌ ಎಂದು ವಿದ್ಯಾರ್ಥಿಗಳು ಆರೋಪಿಸಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದ್ದು ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯವನ್ನು ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸರಿ ಪಡಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತಿದೆ.

ಸಂಶೋಧನಾರ್ಥಿಗಳು, ಫೆಲೋಶಿಪ್ ಇಲ್ಲದೇ, ಸಂಶೋಧನೆಗೆ ಬೇಕಾದ ಸಾಮಗ್ರಿಗಳ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ ಕ್ಷೇತ್ರ ಅಧ್ಯಯನಕ್ಕೆ ಹೋಗಲು ಕೂಡ ಬೇರೊಬ್ಬರ ಮೇಲೆ ಅವಲಂಬನೆಯಾಗಬೇಕಾಗಿ ಬಂದಿದ್ದು, ಇವನ್ನೇಲ್ಲಾ ಕೇಳಲು ಹೋದರೆ, ಹೋರಾಟಕ್ಕೆ ಇಳಿದರೇ, ವಿದ್ಯಾರ್ಥಿಗಳ ಹಕ್ಕನ್ಮು ದಮನ ಮಾಡಲು , ಕನ್ನಡ ವಿವಿಯ ಆಡಳಿತ ಮಂಡಳಿ ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿರುತ್ತಾರೆ.

SCP, TSP ಹಣವನ್ನು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂಬುದು ನಿಯಮವಿದೆ, ಆದರೆ ವಿದ್ಯಾರ್ಥಿಗಳ ಫೆಲೋಶಿಪ್ ನೀಡದೆ ಆ ಹಣವನ್ನು ಕಟ್ಟಡಗಳನ್ನು ಕಟ್ಟಲು ಬಳಸಲಾಗಿದೆ, ಅಲ್ಲದೇ SC,ST ವಿದ್ಯಾರ್ಥಿಗಳ ಫೆಲೋಶಿಪ್ ಮಾತ್ರ ಇನ್ನು ನೀಡಿಲ್ಲ. ಪತ್ರಿಕೆಯ ಮಾಹಿತಿಯ ಪ್ರಕಾರ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಹಣವನ್ನು ವಿಧ್ಯಾರ್ಥಿಗಳಿಗೆ ನೀಡದೇ, ಕಟ್ಟಡ ಕಟ್ಟುವ ಕಾಮಗಾರಿಗೆ ಮತ್ತು ಇತರೆ ಕಾಮಗಾರಿಗಳಿಗೆ ಬಳಿಸಿಕೊಳ್ಳಲಾಗಿದೆ, ಆ ಹಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಮಾಧ್ಯಮ ಕಾರ್ಯದರ್ಶಿ

ಎಸ್.ಐ.ಓ ಕರ್ನಾಟಕ