ಎಸ್.ಐ.ಓ ಕರ್ನಾಟಕ ವೆಬ್ಸೈಟ್ ರಿಲಾಂಚ್

ಬೆಂಗಳೂರು: ಖ್ಯಾತ ವಿದ್ಯಾರ್ಥಿ ಸಂಘಟನೆ ಎಸ್.ಐ.ಓ ಕರ್ನಾಟಕದ ವೆಬ್ಸೈಟ್ ರಿ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘಟನೆಯ ಮಾಹಿತಿಯುಳ್ಳ ಅಂತರ್ಜಾಲ ಮಾಧ್ಯಮವನ್ನು ಮತ್ತಷ್ಟು ಆಕರ್ಷಿತಗೊಳಿಸಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಸ್ತುತ ಸಮಾಜದಲ್ಲಿ ತಾಂತ್ರಿಕತೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ, ವೆಬ್ಸೈಟ್ ಸದುಪಯೋಗವನ್ನು ಕಾರ್ಯಕರ್ತರು, ಸಂಘಟನೆಯನ್ಬು ಅರಿಯಲು ಬಯಸುವವರು ಪಡೆದುಕೊಳ್ಳಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಫ್ಟ್ ವರ್ಡ್ ಸಂಸ್ಥೆಯ ವಿನ್ಯಾಸಕಾರ ಅಕೀಬ್ ವೆಬ್ಸೈಟ್ ನಲ್ಲಾದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಯಾಸೀನ್, ಎಸ್.ಐ.ಓ ಉಡುಪಿ ಜಿಲ್ಲಾಧ್ಯಕ್ಷ ನಾಸಿರ್ ಹೂಡೆ, ಫಾಝಿಲ್ ಉಡುಪಿ ಉಪಸ್ಥಿತರಿದ್ದರು.

ಎಸ್.ಐ.ಓ ಕರ್ನಾಟಕ – ಇ-ಸ್ಕೂಲ್

ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏಳು ದಿನಗಳ ಇ ಸ್ಕೂಲ್ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಯಿತು.

ಇ ಸ್ಕೂಲ್ ಉದ್ಘಾಟನೆಯನ್ನು ಹೂಡೆಯ AIC ಯಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮುಖಾಂತರ ಎಸ್.ಐ.ಓ ರಾಜ್ಯಾಧ್ಯಕ್ಷರಾದ‌ ನಿಹಾಲ್ ಕಿದಿಯೂರು ನೆರವೇರಿಸಿದರು. ಇ-ಸ್ಕೂಲ್ ಉಸ್ತುವಾರಿಯನ್ನು ಅಬ್ದುಲ್ ಹಸೀಬ್ ರಾಜ್ಯ ವಿಸ್ತರಣಾ ಕಾರ್ಯದರ್ಶಿ ನಿರ್ವಹಿಸಿದ್ದರು.

7 ನೇ ತರಗತಿ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ರಾಣಿ ಅಬ್ಬಕ್ಕ ಮತ್ತು ರಾಯಣ್ಣನ ಇತಿಹಾಸ ಕೈ ಬಿಟ್ಟ ರಾಜ್ಯ ಸರಕಾರದ ನಿರ್ಧಾರ ಖಂಡನಾರ್ಹ – ನಿಹಾಲ್ ಕಿದಿಯೂರು ರಾಜ್ಯಾಧ್ಯಕ್ಷರು ಎಸ್.ಐ.ಓ ಕರ್ನಾಟಕ

ಪತ್ರಿಕಾ ಪ್ರಕಟಣೆ

ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ 2020-21 ನೇ ಸಾಲಿನ ಶೈಕ್ಷಣಿಕ ಅವಧಿಯನ್ನು 120-140 ದಿನಗಳಿಗೆ ಮೊಟಕುಗೊಳಿಸಲು ತೀರ್ಮಾನಿಸಲಾಗಿದ್ದು ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹೊರೆಯಾಗದಂತೆ ಸೇಕಡಾ 30% ಪ್ರತಿಶತದಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಲಾಗಿತ್ತು ಅದರಂತೆ ಶಾಲಾ ಪಠ್ಯಪುಸ್ತಕದ ಕೆಲವು ಅಧ್ಯಾಯಗಳನ್ನು ಕೈ ಬಿಡಲು ತಿಳಿಸಿತ್ತು ಅದರ ಬೆನ್ನಲ್ಲೇ ರಾಜ್ಯ ಸರ್ಕಾರವು ದಿನಾಂಕ 28/07/2020 ರಂದು 1 ರಿಂದ 10 ನೇ ತರಗತಿಯ ಪಠ್ಯಕ್ರಮದ ಕೆಲವು ಮಹತ್ವದ ಪಾಠವನ್ನು ಕಡಿತಗೊಳಿಸಿರುವುದನ್ನು ಪ್ರಕಟಿಸಿದೆ.

ಟಿಪ್ಪು ಹೈದರ್ ಅಲಿ ರಾಣಿ ಅಬ್ಬಕ್ಕ ಮತ್ತು ಶಾಲಾ ಪಠ್ಯಕ್ರಮದಿಂದ ಜೀಸಸ್ ಹಾಗೂ ಮೊಹಮ್ಮದ್ ಅವರಂತಹ ವ್ಯಕ್ತಿಗಳನ್ನು ತ್ಯಜಿಸುವುದು ಬಹುವಚನ ನೀತಿಗಳಿಂದ ದೂರವಿರುವುದರ ಸ್ಪಷ್ಟ ಸಂಕೇತ ಮತ್ತು ಭಾರತೀಯ ನಾಗರಿಕತೆಯ ಒಳಗೊಳ್ಳುವಿಕೆ ವಿರುದ್ಧದ ನಡೆಯಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಟಿಪ್ಪು ವಿರೋಧಿ ನೀತಿಯನ್ನು ಮತ್ತು ಕೇಸರಿಕರಣದ ಒಳ ಸಂಚನ್ನು ಸಾಕಾರಗೊಳಿಸಲು ಉದ್ದೇಶ ಪೂರ್ವಕವಾಗಿ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯವರ ಮೈಸೂರು ಸಾಮ್ರಾಜ್ಯದ ಇತಿಹಾಸವನ್ನು ಮರೆಮಾಚುವ ಪ್ರಯತ್ನ ಇದಾಗಿದೆ.

ಬಿಜೆಪಿ ಸರ್ಕಾರವು ಹಿಂದಿನಿಂದಲೂ ತನ್ನ ರಾಜಕೀಯ ಉದ್ದೇಶಕ್ಕಾಗಿ ಕನ್ನಡ ನಾಡಿನ ಹೆಮ್ಮೆಯ ದೊರೆ ರಾಕೆಟ್ ತಂತ್ರಜ್ಞಾನದ ಜನಕ ತನ್ನ ಆಡಳಿತ ಅವಧಿಯಲ್ಲಿ ಪರಧರ್ಮ ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮೊದಲ ಸ್ವಾತಂತ್ರ್ಯ ಹೋರಾಟಗಾರನಾದ ಹಜರತ್ ಟಿಪ್ಪು ಸುಲ್ತಾನ್ ರ ನೈಜ ಇತಿಹಾಸವನ್ನು ತಿರುಚಲು ಷಡ್ಯಂತ್ರ ನಡೆಯುತ್ತಿರುವುದು ಸತ್ಯವಾಗಿದೆ ತಳಮಟ್ಟದಲ್ಲಿಯೆ ಇತಿಹಾಸವನ್ನು ಚಿವುಟಲು ಶಾಲಾ ಮಕ್ಕಳಿಗೆ ಕಲಿಸುವ ಇತಿಹಾಸದ ಪಾಠವನ್ನೆ ಕೊರೋನಾ ನೆಪದಲ್ಲಿ ವಿಧ್ಯಾರ್ಥಿಗಳಿಗೆ ಕಲಿಸದಿರಲು ಬಿಜೆಪಿ ಸರ್ಕಾರ ತನ್ನ ಜಾಣ ನಡೆಯ ಮೂಲಕ ಕಾರ್ಯಸಿದ್ಧಿಗೆ ಅಣಿಯಾಗಿದೆ.

ಈ ನಿರ್ಧಾರದ ಕುರಿತಂತೆ ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸೊಸೈಟಿಯ (KSTBS) ಅಧಿಕಾರಿಗಳು ಟಿಪ್ಪು ಸುಲ್ತಾನ್ ಕುರಿತ ಮೈಸೂರು ಸಾಮ್ರಾಜ್ಯದ ಅಧ್ಯಯನಗಳು 6 ನೇ ಮತ್ತು 10 ನೇ ತರಗತಿಯಲ್ಲಿ ವಿವರವಾಗಿದ್ದು ಅದು ಪುನರಾವರ್ತನೆ ಆಗಬಾರದು ಎಂಬ ನಿಟ್ಟಿನಲ್ಲಿ 7 ನೇ ತರಗತಿಯ ಪಠ್ಯ ಪುಸ್ತಕದಿಂದ ಕೈ ಬಿಡಲಾಗಿದೆ ಎಂಬುದನ್ನು ಸಮರ್ಥಿಸಿಕೊಂಡಿರುವುದು ಮೇಲ್ನೋಟಕ್ಕೆ ನಾಟಕೀಯ ಬೆಳವಣಿಯಾಗಿದೆ ಈ ವಿಚಾರವನ್ನು ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯೂ (DSERT) ತನ್ನ ಅಧಿಕೃತ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಕೇವಲ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯ ಪಾಠವನ್ನು ಕೈ ಬಿಡದೆ 6 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಏಸು ಕ್ರೈಸ್ತ ಮತ್ತು ಪ್ರವಾದಿ ಮುಹಮ್ಮದ್ (ಸ) ರವರ ಭೋಧನೆಗಳನ್ನು ಕೂಡಾ ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.

ಇದೇ ಪ್ರಕಾರವಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯೂ ಕೆಲವು ದಿನಗಳ ಹಿಂದೆ ಸಿಬಿಎಸ್ಇ(CBSE) ಪಠ್ಯಕ್ರಮವನ್ನು ಕಡಿತಗೊಳಿಸುವ ಸೂಚನೆ ನೀಡಿತ್ತು ಅದರ ಅನ್ವಯ (NCERT) ಪಠ್ಯಕ್ರಮವನ್ನು ಕಡಿತಗೊಳಿಸಲು ನಿರ್ಧರಿಸಿ ವಿವಿಧ ತರಗತಿಯ ‌ಸಮಾಜ ವಿಜ್ಞಾನ ವಿಷಯದ ಪೌರತ್ವ ಜಾತ್ಯಾತೀತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಂಬಂಧಿತ ಕೆಲವು ಪಠ್ಯವನ್ನು ಕೈ ಬಿಡುವುದಾಗಿ ಹೇಳಿಕೊಂಡಿತ್ತು.

ಇವೆಲ್ಲ ಚಟುವಟಿಕೆಗಳು ನೋಡಿದ ಮೇಲೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಬಿಜೆಪಿ ಸರ್ಕಾರವು ನಡೆಸುತ್ತಿರುವ ವ್ಯವಸ್ಥಿತ ದಾಳಿಯಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಆದ್ದರಿಂದ ಇಂತಹ ಪಕ್ಷಪಾತ ಧೋರಣೆಯಿಂದ ಕೂಡಿದ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಟ್ಟು ಕರ್ನಾಟಕ ಇತಿಹಾಸದ ಪ್ರಮುಖ ಭಾಗವಾದ ಟಿಪ್ಪು ಸುಲ್ತಾನ ಪಠ್ಯಕ್ರಮ ಸೇರಿದಂತೆ ಕೈ ಬಿಟ್ಟಿರುವ ಪ್ರಮುಖ ಪಠ್ಯಕ್ರಮಗಳನ್ನು ಸೇರಿಸಬೇಕೆಂದು ‌ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಫೆಲೋಶಿಪ್ ಕೊಡಲು ಎಸ್.ಐ.ಓ ಆಗ್ರಹ

ಹಂಪಿ : ಕನ್ನಡ ನಾಡು ನುಡಿಯ ಸಂಶೋಧನೆಗಾಗಿ ಸ್ಥಾಪನೆಯಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಈಗ ಫೆಲೋಶಿಪ್ ಹಣ ಇಲ್ಲದೇ, ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿವಿಯ SC,ST ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡೋದನ್ನು ನಿಲ್ಲಿಸಲಾಗಿದೆ‌ ಎಂದು ವಿದ್ಯಾರ್ಥಿಗಳು ಆರೋಪಿಸಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದ್ದು ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯವನ್ನು ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸರಿ ಪಡಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತಿದೆ.

ಸಂಶೋಧನಾರ್ಥಿಗಳು, ಫೆಲೋಶಿಪ್ ಇಲ್ಲದೇ, ಸಂಶೋಧನೆಗೆ ಬೇಕಾದ ಸಾಮಗ್ರಿಗಳ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ ಕ್ಷೇತ್ರ ಅಧ್ಯಯನಕ್ಕೆ ಹೋಗಲು ಕೂಡ ಬೇರೊಬ್ಬರ ಮೇಲೆ ಅವಲಂಬನೆಯಾಗಬೇಕಾಗಿ ಬಂದಿದ್ದು, ಇವನ್ನೇಲ್ಲಾ ಕೇಳಲು ಹೋದರೆ, ಹೋರಾಟಕ್ಕೆ ಇಳಿದರೇ, ವಿದ್ಯಾರ್ಥಿಗಳ ಹಕ್ಕನ್ಮು ದಮನ ಮಾಡಲು , ಕನ್ನಡ ವಿವಿಯ ಆಡಳಿತ ಮಂಡಳಿ ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿರುತ್ತಾರೆ.

SCP, TSP ಹಣವನ್ನು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂಬುದು ನಿಯಮವಿದೆ, ಆದರೆ ವಿದ್ಯಾರ್ಥಿಗಳ ಫೆಲೋಶಿಪ್ ನೀಡದೆ ಆ ಹಣವನ್ನು ಕಟ್ಟಡಗಳನ್ನು ಕಟ್ಟಲು ಬಳಸಲಾಗಿದೆ, ಅಲ್ಲದೇ SC,ST ವಿದ್ಯಾರ್ಥಿಗಳ ಫೆಲೋಶಿಪ್ ಮಾತ್ರ ಇನ್ನು ನೀಡಿಲ್ಲ. ಪತ್ರಿಕೆಯ ಮಾಹಿತಿಯ ಪ್ರಕಾರ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಹಣವನ್ನು ವಿಧ್ಯಾರ್ಥಿಗಳಿಗೆ ನೀಡದೇ, ಕಟ್ಟಡ ಕಟ್ಟುವ ಕಾಮಗಾರಿಗೆ ಮತ್ತು ಇತರೆ ಕಾಮಗಾರಿಗಳಿಗೆ ಬಳಿಸಿಕೊಳ್ಳಲಾಗಿದೆ, ಆ ಹಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಮಾಧ್ಯಮ ಕಾರ್ಯದರ್ಶಿ

ಎಸ್.ಐ.ಓ ಕರ್ನಾಟಕ

ರಾಜ್ಯ ಆಯ್ದ ಸದಸ್ಯರ ಶಿಬಿರ

ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ರಾಜ್ಯದ ಆಯ್ದ ಸದಸ್ಯರಿಗೆ ನಾಲ್ಕು ದಿನದ ಶಿಬಿರವನ್ನು ಬಿಫ್ಟ್ ನಲ್ಲಿ ಆಯೋಜಿಸಲಾಗಿತ್ತು. ಹಲವಾರು ಸಂಪನ್ಮೂಲ ವ್ಯಕ್ತಿಗಳಿಂದ ಸದಸ್ಯರ ತರಬೇತಿಯನ್ನು ನಡೆಸಲಾಯಿತು.