ಪಾಣೆಮಂಗಳೂರು: ಎಸ್ ಐ ಓ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಪಾಣೆಮಂಗಳೂರು ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಆಶಿಕ್ ಕುಕ್ಕಾಜೆ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡುತ್ತಾ, ನಮ್ಮ ದೇಶದ ಸ್ವತಂತ್ರ್ಯಗೊಳ್ಳಲು ಹಿರಿಯ ನಾಯಕರು ಹಗಲಿರುಳು ಹೋರಾಡಿ ಪ್ರಾಣಾರ್ಪಣೆಗೈದಿದ್ದು ಅವರ ಶ್ರಮವು ವ್ಯರ್ಥವಾಗಿಲ್ಲ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೋರ್ವ ಪ್ರಜೆಯು ತಮ್ಮಿಂದಾದ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸಂಚಾಲಕರಾದ ಮುಖ್ತಾರ್ ಅಹ್ಮದ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು‌.

ಈ ಸಂದರ್ಭದಲ್ಲಿ ಎಸ್ ಐ ಓ ನ ಹಸಿರು ಕರಾವಳಿ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಅಲ್ಲದೇ, ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಎಸ್‌ಐಓ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಅಧ್ಯಕ್ಷ ಮುಸ್ತಫಾ ಎಂ.ಹೆಚ್ ಹಾಗೂ ಎಸ್.ಐಓ ಪಾಣೆಮಂಗಳೂರು ಘಟಕಾಧ್ಯಕ್ಷ ತಮೀಝ್ ಅಲಿ, ಎಚ್ ಆರ್ ಎಸ್ ನ‌ ಕ್ಯಾಪ್ಟನ್ ಸತ್ತಾರ್ ಗೂಡಿನಬಳಿ, ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಅಝ್ಹರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲ್ವಾನ್ ಬೋಳಂಗಡಿ ನಿರೂಪಿಸಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

SIO ಉಪ್ಪಿನಂಗಡಿ ವತಿಯಿಂದ74 ನೇ ಸ್ವಾತಂತ್ರ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಶಾಂತಿ ಸೆಂಟರ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಾನಿಲ್ ಯಾಕೂಬ್,ಮಹಮ್ಮದ್ಇಹ್ಸಾನ್ ,ತನ್ಹಾ ಜಮೀಲ, ನಿಯಾಫ ಮರ್ಯಮ್ ರನ್ನು ಸನ್ಮಾನಿಸಲಾಯಿತು. ಎಸ್. ಐ. ಓ. ಜಿಲ್ಲಾಮಟ್ಟದಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಸ್ಮಾನ್ ಸಹಲ್, ದ್ವಿತೀಯ ಸ್ಥಾನ ಪಡೆದ ಹಾಮಿದ ವಫ, ಮತ್ತು ತೃತೀಯ ಸ್ಥಾನ ಪಡೆದ ಅಹ್ಸನ್ ವದೂದ್ ರಿಗೆ ಬಹುಮಾನ ವಿತರಿಸಲಾಯಿತು. ಆನ್ಲೈನ್ ಅಂತರಾಷ್ಟ್ರೀಯ ಮಟ್ಟದ ಆಝಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ರಹೀಫ್ ರನ್ನು
ಅಭಿನಂದಿಸಲಾಯಿತು

ಜಮಾತ್ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಹಸೀಬ್ ಮತ್ತು ಆಯಿಶಾ ವಿದ್ಯಾಸಂಸ್ಥೆಯ ಚೇರ್ಮನ್ ಅಬ್ದುಲ್ ರವೂಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಹಮ್ಮದ್ ಇಹ್ಸಾನ್ ಕಿರಾಅತ್ ಪಠಿಸಿದರು.ಎಸ್. ಐ. ಓ. ಸ್ಥಾನಿಯಾ ಅಧ್ಯಕ್ಷ ಅಸ್ಲಂ ಪಂಜಳ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು

ಶಿವಮೊಗ್ಗ: ನೂತನ ಪರಿಸರ ನೀತಿ ಪರಿಸರ ವಿರೋಧಿ – ಪ್ರತಿಭಟನೆ

ಶಿವಮೊಗ್ಗ: ಪರಿಸರ ಮರಣ ಶಾಸನವಾಗಲಿರುವ EIA – 2020 ಕರಡನ್ನು ವಿರೋಧಿಸುತ್ತಾ Sio ತೀರ್ಥಹಳ್ಳಿ ವತಿಯಿಂದ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಮತ್ತು ಈ ಪ್ರದರ್ಶನವನ್ನು ನಾವು ಮುಂದುವರಿಸಲಿದ್ದೇವೆ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ನಾವೆಲ್ಲ ಸೇರಿ ಪರಿಸರ ಸಂರಕ್ಷಿಸೋಣ ಮಲೆನಾಡು ಉಳಿಸೋಣ

HRS ಮತ್ತು SIO ನಿಂದ ಕೋವಿಡ್ ಸೋಂಕಿತರ ಮೃತದೇಹ ಅಂತ್ಯ ಸಂಸ್ಕಾರದಲ್ಲಿ ಜಿಲ್ಲಾಡಳಿತದೊಂದಿಗೆ ಸಾಥ್

ಉಡುಪಿ: HRS ಮತ್ತು SIO ಉಡುಪಿ ಕಾರ್ಯಕರ್ತರು ಕೋವಿಡ್ – 19 ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತಿದೆ.

ಈ ಮುಂಚೆ ಲಾಕ್’ಡೌನ್ ಸಂದರ್ಭದಲ್ಲಿ ಎಚ್.ಆರ್.ಎಸ್ ಮತ್ತು ಎಸ್.ಐ.ಓ ಕಾರ್ಯಕರ್ತರು ಸಾವಿರಾರು ವಲಸೆ ಕಾರ್ಮಿಕರಿಗೆ ಊಟ ಮತ್ತು ಬಡವರಿಗೆ ರೇಷನ್ ಕಿಟ್ ವಿತರಿಸಿದರು.

A day with environmentalist

On Account of world environment day, District team met and spent a day with Vijaya Hegde (Environmental Activist, UPCL) he enlightened us on the various ill effects and environmental degradation caused by the UPCL(Udupi Power Corporation Ltd.) And also about the movement led by him to protect the environment.

Having his expertise in the field of research, currently he is working on many alternate energy sources which include tidal energy project too.

Green Initiative
Be the Solution, Not the Pollution