ಎಸ್.ಐ.ಓ ಇಳಕಲ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಇಳಕಲ್ : ಎಸ್.ಐ.ಓ ವಿದ್ಯಾರ್ಥಿ ಸಂಘಟನೆ ಇಳಕಲ್ ಘಟಕದ ವತಿಯಿಂದ ನಗರ ಮಟ್ಟದ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಳಕಲ್ ನಗರದ ಬಸ್ ಸ್ಟ್ಯಾಂಡ್ ರಸ್ತೆಯ ಇಬ್ರಾಹಿಂ ಮಸ್ಜಿದ್ ಹೊರಾಂಗಣದಲ್ಲಿ ದಿನಾಂಕ 30/08/2020 ರಂದು ಬೆಳಿಗ್ಗೆ 11.00 ಗಂಟೆಗೆ ನೆರವೇರಿಸಲಾಯಿತು.

ಸನ್ 2019-2020 ರ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಇಳಕಲ್ ನಗರದ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಮಾಡಿದ ಮೊಹಮ್ಮದ್ ಫೀರ್ ಲಟಗೇರಿ ರವರು ಎಸ್.ಐ.ಓ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮತ್ತು ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಹಾಗೂ ಉನ್ನತ ಶೈಕ್ಷಣಿಕ ವ್ಯಾಸಂಗಕ್ಕೆ ಪ್ರೋತ್ಸಾಹಿಸಲು ತನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗಣ್ಣ ಗದ್ದಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಇಳಕಲ್ ರವರು ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಎಸ್.ಐ.ಓ ಇಳಕಲ್ ಘಟಕದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿ ಯುವಕರು ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ವಿಷಯವನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದು ಹಾಗೂ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮ ಗುರಿಯನ್ನು ಸಾಧಿಸಿ ಸಾಮಾಜಕ್ಕೆ ಉತ್ತಮ ನಾಗರಿಕರಾಗಿ ವರ್ಗಾವಣೆಯಾಗಬೇಕು ಎಂದು ಕರೆಕೊಟ್ಟರು.

ಇನ್ನೋರ್ವ ಅತಿಥಿಯಾದ ಐಹೊಳ್ಳಿ ಸರ್ ರವರು ದೈಹಿಕ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಅಲಂಪೂರಪೇಟ ಇವರು ಮಾತನಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂಘಟನೆಯ ಪದಾಧಿಕಾರಿಗಳಿಗೆ ಶುಭ
ಹಾರೈಸಿದರು, ವಿದ್ಯಾರ್ಥಿಗಳು ಎಂದಿಗೂ ಅಂಕ ಗಳಿಸುವ ಯಂತ್ರವಾಗಬಾರದು ಪಠ್ಯಕ್ರಮವನ್ನು ಕೇವಲ ಹೆಚ್ಚಿನ ಅಂಕ ಗಳಿಸಲು ಮಾತ್ರ ಓದದೆ ಈ ಪಾಠಗಳಿಂದ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಜಾತಿ ಧರ್ಮದ ಸಂಕುಚಿತತೆ ಇರಬಾರದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂಬ ಸಂದೇಶ ನೀಡಿದರು.

ಉಳಿದಂತೆ ಮುಹಮ್ಮದ್ ಅಲಿ ಯತ್ನಟ್ಟಿ ನಿವೃತ್ತ ಶಿಕ್ಷಕರು ಅಂಜುಮನ್ ಸಂಸ್ಥೆ ಇವರು ಮಾತನಾಡಿ ಶಿಕ್ಷಣವು ಮನುಷ್ಯನ ಹುಟ್ಟಿದ ಉದ್ದೇಶವನ್ನು ಹಾಗೂ ಜೀವನದ ನಿಜ ವಾಸ್ತವಿಕತೆಯನ್ನು ಪರಿಚಯಿಸುವ ಮಾಧ್ಯಮವಾಗಿದೆ ಎಂದು ಭಾವಿಸಿದರು ಶಿಕ್ಷಣವು ಒಳಿತು – ಕೆಡುಕುಗಳ ವ್ಯತ್ಯಾಸವನ್ನು ಗುರುತಿಸುವ ಅತ್ಯುತ್ತಮ ವಿಧಾನವಾಗಿದೆ ಎಂದು ಹೇಳಿ ವಿದ್ಯಾರ್ಥಿಗಳ ಚಾರಿತ್ರಿಕ ನಿರ್ಮಾನವು ಉತ್ತಮ ಅಧ್ಯಯನದಿಂದ ಸಾಧ್ಯವಾಗುತ್ತದೆ ಎಂಬ ತಮ್ಮ ವಿಚಾರವನ್ನು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಮ್ಮದ್ ಫೀರ್ ಲಟಗೇರಿ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಎಸ್.ಐ.ಓ ಕರ್ನಾಟಕ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಐಹೊಳ್ಳಿ ಸರ್, ಸಂಗಣ್ಣ ಗದ್ದಿ, ಸಯೀದ್ ಅಹ್ಮದ್ ಕೊತ್ವಾಲ್, ಮುಹಮ್ಮದ್ ಅಲಿ ಯತ್ನಟ್ಟಿ, ಅಲ್ತಾಫ್ ಬಿಳೇಕುದರಿ, ಮುಬಷ್ಷಿರ್ ಶೇಕ್ ರವರು ವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಎಸ್.ಐ.ಓ ಕರ್ನಾಟಕದಿಂದ ವಿದ್ಯಾರ್ಥಿಗೆ ಸನ್ಮಾನ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.5% ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಮಹೇಶ್ ರನ್ನು ಎಸ್.ಐ.ಓ ಕರ್ನಾಟಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹಾಲ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುವುದು ನಿಲ್ಲಿಸಲಿ, ಪರೀಕ್ಷೆ ಹಿಂಪಡೆಯಿರಿ – ಎಸ್.ಐ.ಓ ಆಗ್ರಹ

ಪತ್ರಿಕಾ ಪ್ರಕಟಣೆಗಾಗಿ

ಬೆಂಗಳೂರು: ಈಗಾಗಲೇ ರಾಜ್ಯ ಸರಕಾರ ಅಂತಿಮ ಸೆಮಿಸ್ಟರ್ ಹೊರತು ಪಡಿಸಿ ಬೇರೆಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಂತೆ ನಿರ್ದೇಶಿಸಿ ಆದೇಶ ಹೊರಡಿಸಿದ ಹೊರತಾಗಿಯೂ ಕೆ.ಎಸ್.ಎಲ್.ಯು ವಿಶ್ವವಿದ್ಯಾಲಯ ಪಠ್ಯಕ್ರಮ ಪೂರ್ಣವಾಗದೇ ಪರೀಕ್ಷೆ ನಡೆಸಲು ಹೊರಟಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.

ಕೊರೊನಾ ಸೋಂಕಿನಿಂದಾಗಿ ಬೋಧನಾ ತರಗತಿಗಳು ನಡೆಯದೆ ಅರ್ಧದಷ್ಟೂ ಪಠ್ಯಕ್ರಮವೇ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ‌‌
ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು
ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಈ ಮೂಲಕ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಹೊರ ರಾಜ್ಯ ವಿದ್ಯಾರ್ಥಿಗಳು ಕೂಡ ಕೋವಿಡ್-19 ನಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಂದು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕೂಡ ಇಲ್ಲ. ಮತ್ತೊಂದು ಕಡೆ ಹಾಸ್ಟೆಲ್ ಗಳನ್ನು ಕೋವಿಡ್ – 19 ವ್ಯವಸ್ಥೆಗೆ ಬಳಸುತ್ತಿರುವುದರಿಂದ ಅವರು ಬಂದು ಉಳಿದು ಕೊಳ್ಳುವುದು ಎಲ್ಲಿ ಎಂಬ ಪ್ರಶ್ನೆ ಉದ್ಬವವಾಗಿದೆ. ಆದರೆ ವಿಶ್ವವಿದ್ಯಾಲಯ ಇದ್ಯಾವುದರ ಬಗ್ಗೆ ಚಿಂತಿಸದೆ ಬೇಜಾಬ್ದಾರಿಯಿಂದ ಪರೀಕ್ಷಾ ದಿನಾಂಕ ಪ್ರಕಟಿಸಿ ಹಾಜರಾಗಿ ಎಂದಿರುವುದು ಖಂಡನಾರ್ಹ

ಇನ್ನು ಕೊರೊನಾ‌ ಸೋಂಕಿನಿಂದಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸುವುದು ಸೂಕ್ತವಲ್ಲದ ಕಾರಣ ಕಾನೂನು ಪದವಿಯ ಅಂತಿಮ‌ ವರ್ಷದ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆಗೆ ಹಾಜರಾಗಲು ಕಾನೂನು ವಿಶ್ವವಿದ್ಯಾಲಯ ಅವಕಾಶ ನೀಡಬೇಕು.

ವಿದ್ಯಾರ್ಥಿಗಳ ಜೀವನಕ್ಕಿಂತ ಪರೀಕ್ಷೆ ದೊಡ್ಡದಲ್ಲ. ಪರೀಕ್ಷೆ ನಡೆಸುವ ಮುನ್ನ ವಿದ್ಯಾರ್ಥಿಗಳಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಯುಜಿಸಿ ಕೂಡ ಈ ಹಿನ್ನಲೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಹೊರ ತಂದಿದೆ. ಆದರೆ ಕೆ.ಎಸ್.ಎಲ್.ಯು ಈ ಎಲ್ಲ ಆದೇಶ ಗಾಳಿಗೆ ತೂರಿ ಪರೀಕ್ಷೆ ನಡೆಸಲು ಹೊರಟಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ಕೂಡಲೇ ಆದೇಶ ಹಿಂಪಡೆಯುವಂತೆ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಇತೀ

ಮೊಹಮ್ಮದ್ ಫೀರ ಲಟಗೇರಿ

(ಕ್ಯಾಂಪಸ್ ಕಾರ್ಯದರ್ಶಿ -ಎಸ್.ಐ.ಓ ಕರ್ನಾಟಕ)

ಪಾಣೆಮಂಗಳೂರು: ಎಸ್ ಐ ಓ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಪಾಣೆಮಂಗಳೂರು ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಆಶಿಕ್ ಕುಕ್ಕಾಜೆ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡುತ್ತಾ, ನಮ್ಮ ದೇಶದ ಸ್ವತಂತ್ರ್ಯಗೊಳ್ಳಲು ಹಿರಿಯ ನಾಯಕರು ಹಗಲಿರುಳು ಹೋರಾಡಿ ಪ್ರಾಣಾರ್ಪಣೆಗೈದಿದ್ದು ಅವರ ಶ್ರಮವು ವ್ಯರ್ಥವಾಗಿಲ್ಲ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೋರ್ವ ಪ್ರಜೆಯು ತಮ್ಮಿಂದಾದ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸಂಚಾಲಕರಾದ ಮುಖ್ತಾರ್ ಅಹ್ಮದ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು‌.

ಈ ಸಂದರ್ಭದಲ್ಲಿ ಎಸ್ ಐ ಓ ನ ಹಸಿರು ಕರಾವಳಿ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಅಲ್ಲದೇ, ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಎಸ್‌ಐಓ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಅಧ್ಯಕ್ಷ ಮುಸ್ತಫಾ ಎಂ.ಹೆಚ್ ಹಾಗೂ ಎಸ್.ಐಓ ಪಾಣೆಮಂಗಳೂರು ಘಟಕಾಧ್ಯಕ್ಷ ತಮೀಝ್ ಅಲಿ, ಎಚ್ ಆರ್ ಎಸ್ ನ‌ ಕ್ಯಾಪ್ಟನ್ ಸತ್ತಾರ್ ಗೂಡಿನಬಳಿ, ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಅಝ್ಹರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲ್ವಾನ್ ಬೋಳಂಗಡಿ ನಿರೂಪಿಸಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

SIO ಉಪ್ಪಿನಂಗಡಿ ವತಿಯಿಂದ74 ನೇ ಸ್ವಾತಂತ್ರ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಶಾಂತಿ ಸೆಂಟರ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಾನಿಲ್ ಯಾಕೂಬ್,ಮಹಮ್ಮದ್ಇಹ್ಸಾನ್ ,ತನ್ಹಾ ಜಮೀಲ, ನಿಯಾಫ ಮರ್ಯಮ್ ರನ್ನು ಸನ್ಮಾನಿಸಲಾಯಿತು. ಎಸ್. ಐ. ಓ. ಜಿಲ್ಲಾಮಟ್ಟದಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಸ್ಮಾನ್ ಸಹಲ್, ದ್ವಿತೀಯ ಸ್ಥಾನ ಪಡೆದ ಹಾಮಿದ ವಫ, ಮತ್ತು ತೃತೀಯ ಸ್ಥಾನ ಪಡೆದ ಅಹ್ಸನ್ ವದೂದ್ ರಿಗೆ ಬಹುಮಾನ ವಿತರಿಸಲಾಯಿತು. ಆನ್ಲೈನ್ ಅಂತರಾಷ್ಟ್ರೀಯ ಮಟ್ಟದ ಆಝಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ರಹೀಫ್ ರನ್ನು
ಅಭಿನಂದಿಸಲಾಯಿತು

ಜಮಾತ್ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಹಸೀಬ್ ಮತ್ತು ಆಯಿಶಾ ವಿದ್ಯಾಸಂಸ್ಥೆಯ ಚೇರ್ಮನ್ ಅಬ್ದುಲ್ ರವೂಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಹಮ್ಮದ್ ಇಹ್ಸಾನ್ ಕಿರಾಅತ್ ಪಠಿಸಿದರು.ಎಸ್. ಐ. ಓ. ಸ್ಥಾನಿಯಾ ಅಧ್ಯಕ್ಷ ಅಸ್ಲಂ ಪಂಜಳ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು