ವಿದ್ಯಾರ್ಥಿಗಳ ಅಫಘಾತವಾದ ವಸತಿ ನಿಲಯಕ್ಕೆ ಅಬ್ದುಲ್ ಹನ್ನಾನ್ ಭೇಟಿ

ಗೂಡ್ಸ್ ವಾಹನದಲ್ಲಿ ಮಕ್ಕಳನ್ನು ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬೇಜವಾಬ್ದಾರಿತನದಿಂದಾದಗಿ ಸುಮಾರು 30 ವಿದ್ಯಾರ್ಥಿನಿಯರಿದ್ದ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೆ ಗಾಯಗಳಾಗಿ, 4 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಇಂದು ಎಸ್.ಐ.ಓ ಕರ್ನಾಟಕದ ರಾಜ್ಯ ಸಾರ್ವಜನಿಕ ಸಂಪರ್ಕ ಸಮಿತಿಯ ಸದಸ್ಯರಾದ ಅಬ್ದುಲ್ ಹನ್ನಾನ್ ರಾಯಚೂರು ದುರ್ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿರುವ ವಸತಿ ನಿಲಯಕ್ಕೆ ತೆರಳಿ ವಾರ್ಡನ್ ಬಳಿ ಮಾತನಾಡಿದರು.

ಈ ಬೇಜಾಬ್ದಾರಿಯ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್.ಐ.ಓ ಕರ್ನಾಟಕ ಒತ್ತಾಯಿಸಿದೆ.

ಬಸವ ತತ್ವ ಮತ್ತು ಇಸ್ಲಾಮ್ ಪುಸ್ತಕ ಬಿಡುಗಡೆ

ಉಡುಪಿ: ಶ್ರೀ ಸಿದ್ಧ ಬಸವ ಕಬೀರ ಸ್ವಾಮೀಜಿಯವರು ಇಂದು ಎಸ್.ಐ.ಓ ಕರ್ನಾಟಕ ಹೊರ ತಂದ ಬಸವತತ್ವ ಮತ್ತು ಇಸ್ಲಾಮ್ ಪುಸ್ತಕವನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ನವಾಜ್, ಎಸ್.ಐ.ಓ ಕರ್ನಾಟಕದ ಕಾರ್ಯದರ್ಶಿ ಶಾಫಿ ಅವರು ಉಪಸ್ಥಿತರಿದ್ದರು.

ಕೊಪ್ಪಳದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಐದು ವಿದ್ಯಾರ್ಥಿಗಳು – ಎಸ್.ಐ.ಓ ಆಕ್ರೋಶ

ಕೊಪ್ಪಳ: ಬನ್ನಿಕಟ್ಟಿ ಹತ್ತಿರದ ಹೈಸ್ಕೂಲ್ ಹಾಸ್ಟೆಲಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಲ್ಲಿ ಐದು ವಿದ್ಯಾರ್ಥಿಗಳು ಮೃತಪಟ್ಟದ್ದಾರೆ.

ಈ ದುರ್ಘಟನೆಯು ನೇರವಾಗಿ ಹಾಸ್ಟೆಲಿನ ವಾರ್ಡನ್ ಮತ್ತು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಯದಿಂದಾಗಿದ್ದು, ಈ ಮುಂಚೆ ಹಲವು ಸಂಘಟನೆಗಳು ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದರೂ ನಿರ್ಲಕ್ಷಿಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಡೆಗಣಿಸಿ ಈ ದುರ್ಘಟನೆಗೆ ಕಾರಣವಾದ ಎಲ್ಲ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ಮನೆ ಬಿಟ್ಟು ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಸರಕಾರ ಎಷ್ಟು ಕಾಳಜಿ ಹೊಂದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡ ನೋವಿಗೆ ಪರಿಹಾರ ನೀಡಲು ಸರಕಾರಕ್ಕೆ ಸಾಧ್ಯವೇ? ಬೇರೆಲ್ಲಾ ವಿಚಾರದಲ್ಲಿ ಕೋಟಿಗಟ್ಟಲೆ ಪೋಲು ಮಾಡುವ ಸರಕಾರಗಳು ಯಾಕೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಿರ್ಲಕ್ಯ ಮಾಡುತ್ತಿದೆ. ಈ ಬಗ್ಗೆ ಕೂಡಲೇ ಸರಕಾರ ಎಚ್ಚೆತ್ತು ಸರಕಾರಿ ಹಾಸ್ಟೆಲ್ಗಳಲ್ಲಿನ ಅವ್ಯವಸ್ಥೆ ಸರಿಪಡಿಸುವುದರೊಂದಿಗೆ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕೆಂದು ಈ ಮೂಲಕ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.

ರಾಜ್ಯ ಮಾಧ್ಯಮ ಕಾರ್ಯದರ್ಶಿ.

ಎಸ್.ಐ.ಓ ಕರ್ನಾಟಕ

ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿಗಳ ಪಾತ್ರ – ವಿಚಾರಗೋಷ್ಠಿ

ಮೇಲ್ತೆನೆ-ಎಸ್‌ಐಒ ವತಿಯಿಂದ ವಿಚಾರಗೋಷ್ಠಿ

ಮಂಗಳೂರು, ಆ.14: ಕರಾವಳಿಯ ಬ್ಯಾರಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಸ್ವಾತಂತ್ರ ಹೋರಾಟಗಳಲ್ಲಿ ಪಾತ್ರ ವಹಿಸಿದ್ದರೂ ಕೂಡ ಕೆಲವು ಕಾರಣದಿಂದ ಅವರು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಲಿಲ್ಲ ಎಂದು ಯುವ ಲೇಖಕ ಇಸ್ಮತ್ ಪಜೀರ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ-ಮೇಲ್ತೆನೆ ಹಾಗೂ ಎಸ್‌ಐಒ ಉಳ್ಳಾಲ ಘಟಕದ ವತಿಯಿಂದ ತೊಕ್ಕೊಟ್ಟಿನ ಕಾರುಣ್ಯ ಸದನದಲ್ಲಿ ಬುಧವಾರ ನಡೆದ ‘ಸ್ವಾತಂತ್ರ ಹೊರಾಟದಲ್ಲಿ ಬ್ಯಾರಿಗಳ ಪಾತ್ರ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಇಂದು ಹೆಜ್ಜೆ ಹೆಜ್ಜೆಗೂ ಮುಸ್ಲಿಮರು ತನ್ನ ದೇಶ ನಿಷ್ಠೆ ಸಾಬೀತುಪಡಿಸಬೇಕಾದ ಕೇಡುಗಾಲದಲ್ಲಿ ಬದುಕುತ್ತಿದ್ದಾರೆ. ಯಾರು ದೇಶದ ವಿಮೋಚನೆಗಾಗಿ ಸೊತ್ತು, ವಿತ್ತ ಮತ್ತು ಪ್ರಾಣವನ್ನು ಅರ್ಪಿಸಿದರೋ ಅವರ ಕೊಡುಗೆಗಳನ್ನು ಶೂನ್ಯವೆಂದೂ, ಯಾರು ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದರೋ ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿ ಚಿತ್ರಿಸಲ್ಪಡುತ್ತಿದ್ದಾರೆ. ಕರಾವಳಿಯ ಮುಸ್ಲಿಮರ ಪೈಕಿ ಅನೇಕ ಮಂದಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಜೈಲಿಗೆ ಕಳುಹಿಸಿದವರನ್ನು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅನೇಕ ಬ್ಯಾರಿ ಮುಸ್ಲಿಂ ಸ್ವಾತಂತ್ರ ಹೋರಾಟಗಾರರು ಆ ಪುಟಗಳಲ್ಲಿ ದಾಖಲೆಯಾಗದೆ ವಂಚಿತರಾದರು ಎಂದು ಇಸ್ಮತ್ ನುಡಿದರು.

ಮುಸ್ಲಿಮರಿಗೆ ಸ್ವಾತಂತ್ರ್ಯ ಸಂಗ್ರಾಮವೆಂಬುದು ಧಾರ್ಮಿಕ ಬಾಧ್ಯತೆಯೂ ಆಗಿತ್ತು. ಆ ನಿಟ್ಟಿನಲ್ಲಿ ದೇಶದ ಇತರ ಭಾಗಗಳ ಮುಸ್ಲಿಮರು ಹೇಗೆ ಹೋರಾಡಿದರೋ ಹಾಗೆಯೇ ಕರಾವಳಿ ಕರ್ನಾಟಕದ ಬ್ಯಾರಿ ಮುಸ್ಲಿಮರೂ ಬ್ರಿಟಿಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿದ್ದರು. ಜಿಲ್ಲೆಯ ಬ್ಯಾರಿ ಮುಸ್ಲಿಮರ ಧಾರ್ಮಿಕ ವಿಚಾರದಲ್ಲಿ ಮಲಬಾರ್ ಪ್ರದೇಶದ ಧಾರ್ಮಿಕ ವಿದ್ವಾಂಸರ ಪ್ರಭಾವ ಅಂದೂ ಇಂದಿನಂತೆಯೇ ದಟ್ಟವಾಗಿತ್ತು. ಕೇರಳದ ಪ್ರಮುಖ ಉಲಮಾ ನಾಯಕ ವೆಲಿಯಂಗೋಡು ಉಮರ್ ಖಾಝಿ ಅಂದು ಬ್ರಿಟಿಷರ ವಿರುದ್ಧ ಜಿಹಾದ್‌ಗೆ ನೀಡಿದ ಫತ್ವಾವನ್ನು ಅನುಸರಿಸಿ ಮಂಗಳೂರು ಸುತ್ತಮುತ್ತಲಿನ ಬ್ಯಾರಿ ಮುಸ್ಲಿಮರು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡಿದ್ದರು ಎಂದು ಇಸ್ಮತ್ ಹೇಳಿದರು.

ಉಳ್ಳಾಲ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ವಿಷಯ ಮಂಡಿಸಿ ಸ್ವಾತಂತ್ರ ಹೋರಾಟದಲ್ಲಿ ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಮುಸ್ಲಿಮರು ಪಾಲ್ಗೊಂಡಿದ್ದಾರೆ. ಆ ಪೈಕಿ ಕರಾವಳಿಯ ಅದರಲ್ಲೂ ಗ್ರಾಮಾಂತರ ಪ್ರದೇಶದ ಬ್ಯಾರಿ ಮುಸ್ಲಿಮರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಇತಿಹಾಸ ಪುಟಗಳಲ್ಲಿ ದಾಖಲೆಯಾಗದಿರುವ ಮೂಲಕ ಆದ ಅನ್ಯಾಯವನ್ನು ಇನ್ನಾದರು ಅಧ್ಯಯನ ನಡೆಸಿ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಬ್ಯಾರಿ ಹಿರಿಯರ ಹೋರಾಟಕ್ಕೆ ನಾವು ಅಪಚಾರ ಎಸಗಿದಂತಾಗುತ್ತದೆ ಎಂದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷ ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಐಒ ಕಾರ್ಯಕರ್ತ ಶಾಹಿಲ್ ಕಿರಾಅತ್ ಪಠಿಸಿದರು. ಎಸ್‌ಐಒ ಉಳ್ಳಾಲ ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮನಿಗೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಆಶಿರುದ್ದೀನ್ ಆಲಿಯಾ ಮಂಜನಾಡಿ ವಂದಿಸಿದರು.
ion slot
ion casino
asia toto
asiatoto slot
situs slot4d
togel online
idtribun
udinslot
asiatoto
tribun855
slot4d

People of Flood areas in North Karnataka need immediate help

May the people of Flood areas in especially North Karnataka and other areas recieve immediate help and aid from fellow brethren.

Let us extend our hands and help our fellow humans in this hour of need.
Scores of houses have been water logged, people have been forced to evacuate thier homes and villages and take shelter in relief camps or their relatives homes.
Some ways in which we can contribute and help :
1) Contribute generously to HRS fund and other recognised relief bodies
2) If you are nearby the flood affected areas, join in to rescue operations according to your capability
3) Visit local relief camps if set up and ensure availability of hygienic food
4) Ensure necessary medical camps are set up for the affected people
5) Conduct mass fund collection drive in religious centers such as Temples, Mosques, Churches and other community centers
6) Pray for the affected families that their pain and sorrows are mellowed down.
7) In long term, carry a post analysis of erratic climatic conditions of erratic floods and droughts.
ion slot
ion casino
asia toto
asiatoto slot
situs slot4d
togel online
idtribun
udinslot
asiatoto
tribun855
slot4d